gas constant
ನಾಮವಾಚಕ

(ಭೌತವಿಜ್ಞಾನ) ಅನಿಲ ಸ್ಥಿರ; ಅನಿಲಗಳ ತಾಪ, ಒತ್ತಡ, ಮತ್ತು ಗಾತ್ರಗಳಿಗಿರುವ ಸಂಬಂಧವನ್ನು ನಿರೂಪಿಸುವ ‘ಸ್ಥಿತಿ ಸಮೀಕರಣ’ದಲ್ಲಿ (equation of state of gases) ಕಂಡುಬರುವ ಆದರ್ಶ ಅನಿಲವನ್ನು ಪರಿಗಣನೆಗೆ ತೆಗೆದುಕೊಂಡಾಗ ಒಂದು ಮೋಲ್‍ (mole) ಅನಿಲದ ಗಾತ್ರ ಮತ್ತು ಒತ್ತಡಗಳ ಗುಣಲಬ್ಧವನ್ನು ನಿರಪೇಕ್ಷ ತಾಪದಿಂದ ಭಾಗಿಸಿದಾಗ ದೊರಕುವ ಸಂಖ್ಯೆಗೆ ಸಮವಾಗಿರುವ, ಒಂದು ಸ್ಥಿರ ಸಂಖ್ಯೆ (= ಒಂದು ಡಿಗ್ರಿಗೆ $8.314\times 10^7$ ಅರ್ಗ್‍ಗಳು).